ಮೃಗವಧೆ(ಮಿಗವನ್ನು ವಧಿಸಿದ ಸ್ಥಳ) ಕ್ಷೇತ್ರ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನಿಂದ ೨೫ ಕಿ ಮಿ ಹಾಗು ಕೊಪ್ಪ ದಿಂದ ೨೨ ಕಿಮಿ ದೂರದಲ್ಲಿದೆ. ಮಲಹಾನಿಕರೇಶ್ವರ ಎಂಬ ಮೂಲ ಹೆಸರಿನ ಈ ಲಿಂಗವಿರುವ ದೇವಸ್ಥಾನ ಇಂದು ಮಲ್ಲಿಕಾರ್ಜುನ ದೇವಸ್ಥಾನವೆಂದು ಪ್ರಸಿದ್ಧಿ ಪಡೆದಿದೆ. == ಐತಿಹ್ಯ == ವನವಾಸ ಸಂದರ್ಭದಲ್ಲಿ ಶ್ರೀ ರಾಮನು, ಚಿನ್ನದ ಜಿಂಕೆಯ ರೂಪದಲ್ಲಿ ಬಂದ ಮಾರೀಚನನ್ನು ವಧೆ ಮಾಡಿದ್ದು ಈ ಸ್ಥಳದಲ್ಲೆಂದು ಪ್ರತೀತಿ. ಇದರಿಂದುಂಟಾದ ಬ್ರಹ್ಮಹತ್ಯ ದೋಷದಿಂದ ಪಾರಾಗಲು ಶ್ರೀರಾಮನು ಮಾರೀಚನ ದೇಹದಲ್ಲಿದ್ದ ಬಾಣವನ್ನು ಹೊರತೆಗೆದು ಬ್ರಾಹ್ಮೀ ನದಿಯ ದಂಡೆಯ ಮೇಲೆ ಶಿವಲಿಂಗವೊಂದನ್ನು ಸ್ಥಾಪಿಸುವನು. ಇದೇ ಇಂದಿನ ಪ್ರಸಿದ್ಧ ಮಲ್ಲಿಕಾರ್ಜುನ ದೇವಸ್ಥಾನ. ಮಲ್ಲಿಕಾರ್ಜುನ ದೇವಸ್ಥಾನದ ಸುತ್ತಲೂ ಈಶ್ವರನ ಸಮಸ್ತ ಗಣಗಳು ನೆಲೆಸಿವೆ ಎನ್ನುತ್ತಾರೆ. == ನಿರ್ಮಾಣ == ಈ ದೇವಾಲಯವನ್ನು ಚಾಲುಕ್ಯರ ಅರಸನಾದ ತ್ರಿಭುವನಮಲ್ಲನು ೧೦೬೦ ರಲ್ಲಿ ನಿರ್ಮಿಸಿದನು. ಕಾಲಾಂತರದಲ್ಲಿ ಕೆಳದಿ ಸೋಮಶೇಖರನ ಕಾಲದಲ್ಲಿ ದೇವಾಲಯವನ್ನು ಪುನರುತ್ಥಾನ ಮಾಡಲಾಯಿತು. ನಾಲ್ಕೂವರೆ ಅಡಿ ಎತ್ತರದ ಶಿವಲಿಂಗ ಇಲ್ಲಿನ ವೈಶಿಷ್ಟ್ಯ. == ಇಲ್ಲಿನ ಇತರ ಪ್ರಮುಖ ದೇವಾಲಯಗಳು == ಶನೀಶ್ವರ ದೇವಾಲಯ, ಮೃಗವಧೆ- ಈ ದೇವಸ್ಥಾನದಲ್ಲಿರುವ ಶನೀಶ್ವರ ದೇವಾಲಯವೂ ಮಲೆನಾಡಿನಲ್ಲಿ ಪ್ರಸಿದ್ಧಿ ಹೊಂದಿದೆ ಹಾಗೂ ಅತಿ ಹೆಚ್ಚು ಭಕ್ತರು ಈ ದೇವರ ದರ್ಶನಕ್ಕೆ ಬರುತ್ತಾರೆ. ಇದಲ್ಲದೇ ಈ ದೇವಸ್ಥಾನದಲ್ಲಿ ಶಂಕರೇಶ್ವರ, ಉಗ್ರ ನರಸಿಂಹ, ಆಂಜನೇಯ ಮತ್ತು ಪಂಜುರ್ಲಿ ದೇವಾಲಯಗಳೂ ಇವೆ. = ಬಾಹ್ಯ ಕೊಂಡಿಗಳು = ://..///2011/07/21/113469. 2017-11-26 ವೇಬ್ಯಾಕ್ ಮೆಷಿನ್ ನಲ್ಲಿ.